ಜೈ ತುಲುನಾಡ್ (ರಿ.) ಕುಡ್ಲ ಘಟಕದ ಹೊಸ ಪದಾಧಿಕಾರಿಗಳ ಆಯ್ಕೆ
ಜೈ ತುಲುನಾಡ್ (ರಿ.) ಕುಡ್ಲ ಘಟಕದ ಹೊಸ ಪದಾಧಿಕಾರಿಗಳ ಆಯ್ಕೆ
ಮಂಗಳೂರು, ಸೆಪ್ಟೆಂಬರ್ 29, 2024: ಜೈ ತುಲುನಾಡ್ (ರಿ.) ಸಂಘಟನೆಯ ಮಂಗಳೂರು (ಕುಡ್ಲ) ಘಟಕದ ವಾರ್ಷಿಕ ಸಾಮಾನ್ಯ ಸಭೆ ಹಾಗೂ ಪದಗ್ರಹಣ ಸಮಾರಂಭವು ಭಾನುವಾರ, ಸೆಪ್ಟೆಂಬರ್ 29 ರಂದು ಮಧ್ಯಾಹ್ನ 2 ಗಂಟೆಗೆ ಕುಳೂರಿನ ಫಲ್ಗುಣೆ ಸಭಾಂಗಣದಲ್ಲಿ ವಿಜೃಂಭಣೆಯಿಂದ ನಡೆಯಿತು.
ಸಂಘಟನೆಯ ಕೇಂದ್ರ ಸಮಿತಿಯ ನೇತೃತ್ವದಲ್ಲಿ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಶಿಸ್ತುಬದ್ಧವಾಗಿ ನಡೆಯಿತು. ಈ ಸಂದರ್ಭದಲ್ಲಿ ನೂತನ ಪದಾಧಿಕಾರಿಗಳಾಗಿ ಕೆಳಕಂಡವರು ಆಯ್ಕೆಯಾದರು:
* ಅಧ್ಯಕ್ಷ: ಮನೀಶ್ ಕುಮಾರ್
* ಉಪಾಧ್ಯಕ್ಷ: ಚೇತನ್ ಅಂಚನ್
* ಕಾರ್ಯದರ್ಶಿ: ಲತಾ ಡಿಂಪಲ್
* ಉಪ ಕಾರ್ಯದರ್ಶಿಗಳು: ರಾಜೇಶ್ ಶೆಟ್ಟಿ, ಚಂದ್ರಶೇಖರ್ ತುಲುವೆ
* ಕೋಶಾಧಿಕಾರಿ: ಪುನೀತ್ ಕುಮಾರ್
* ಉಪ ಕೋಶಾಧಿಕಾರಿ: ನಾಗರಾಜ್ ಶೆಟ್ಟಿಗಾರ್
* ಸಂಘಟನಾ ಕಾರ್ಯದರ್ಶಿ: ಭವಿಷ್ಯ ಎಸ್.ಎಸ್.
* ಉಪ ಸಂಘಟನಾ ಕಾರ್ಯದರ್ಶಿ: ಅಕ್ಷಿತ್ ಶೆಟ್ಟಿ
* ಕಾರ್ಯಕಾರಿ ಸಮಿತಿ ಸದಸ್ಯರು: ದುರ್ಗಾ ಪ್ರಸಾದ್ ರೈ, ಕೀರ್ತನ್ ಆರ್ ಕೋಟ್ಯಾನ್, ಶರತ್‌ರಾಜ್ ಆಲಂಕಾರ್, ಸಂಕೇತ್ ಯೆಯ್ಯಾಡಿ
ಕಾರ್ಯಕ್ರಮದಲ್ಲಿ ಜೈ ತುಲುನಾಡ್ (ರಿ.) ಕೇಂದ್ರ ಸಮಿತಿಯ ಅಧ್ಯಕ್ಷ ಉದಯ ಪೂಂಜ ತಾರಿಪಾಡಿ ಗುತ್ತು, ಪ್ರಧಾನ ಕಾರ್ಯದರ್ಶಿ ಪೂರ್ಣಿಮಾ ಬಂಟ್ವಾಳ, ಪ್ರಧಾನ ಕೋಶಾಧಿಕಾರಿ ರಾಜಶ್ರೀ ದೇವಿಪುರ್, ಪ್ರಧಾನ ಸಂಘಟನಾ ಕಾರ್ಯದರ್ಶಿ ಚಿತ್ರಾಕ್ಷಿ ತೆಗ್ಗು, ಕಾರ್ಯಕಾರಿ ಸಮಿತಿಯ ಸದಸ್ಯರಾದ ಜೀವಿತಾ ಕುತ್ತಾರ್,ಅಶ್ವಿತಾ, ಸ್ಥಾಪಕ ಸಮಿತಿಯ ಸದಸ್ಯ ರಕ್ಷಿತ್‌ರಾಜ್ ಕೋಟ್ಯಾನ್, ಮತ್ತು ಕುಡ್ಲ ಘಟಕದ ಮಾಜಿ ಅಧ್ಯಕ್ಷ ನಿರಂಜನ್ ಕರ್ಕೇರ ಉಪಸ್ಥಿತರಿದ್ದರು.
ಸ್ಥಾಪಕ ಸಮಿತಿಯ ಸದಸ್ಯ ಕಿರಣ್ ತುಲುವೆ ಅವರು ಸಂಘಟನೆಯ ಅಭಿವೃದ್ಧಿ ಹಾಗೂ ದಿಕ್ಕುಗಳ ಬಗ್ಗೆ ಮಹತ್ವಪೂರ್ಣ ಸಲಹೆಗಳನ್ನು ನೀಡಿದರು. ಹೊಸ ತಂಡದ ಆಯ್ಕೆಯೊಂದಿಗೆ ಸಂಘಟನೆಯ ಚಟುವಟಿಕೆಗಳು ಇನ್ನಷ್ಟು ವೇಗ ಪಡೆಯಲಿವೆ ಎಂಬ ಆಶಯ ಕಾರ್ಯಕ್ರಮದ ಕೊನೆಗೆ ವ್ಯಕ್ತವಾಯಿತು.
Comments
Post a Comment